ಶ್ರೀಮಠವು ಪ್ರತಿವರ್ಷವೂ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾಲಾವೈಭವಗಳನ್ನೊಳಗೊಂಡ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ.ಚಾತುರ್ಮಾಸ್ಯ ವ್ರತ: ಈ ಅವಧಿಯಲ್ಲಿ ಶಾಸ್ತ್ರ ಸಮೀಕ್ಷೆ, ವೇದ ಸಮ್ಮೇಳನ, ಕೃಷಿ, ಚಿತ್ರಕಲೆ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳು ಜರುಗುವವು. ಗುರುಶಿಷ್ಯ ಸಮಾಗಮವಾಗುವ ಈ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುವವು.
ರಾಷ್ಟ್ರ ಹಾಗು ರಾಜ್ಯಮಟ್ಟದ ಸಾಮವೇದ, ಆಯುರ್ವೇದ, ಯಕ್ಷಗಾನ, ಕೃಷಿ ಮೊದಲಾದ ಸಮ್ಮೇಳನಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಲು ಚಿತ್ರಕಲೆ, ಸಂಗೀತ, ಭಾಷಣ, ಭಗವದ್ಗೀತೆ ಮತ್ತು ಕ್ರೀಡಾಸ್ಪರ್ಧೆಗಳನ್ನು ಸಂಘಟಿಸಿ ಪುರಸ್ಕರಿಲಾಗುತ್ತಿದೆ