Monday, June 30, 2008

ಶ್ರೀರಾಘವೇಶ್ವರಭಾರತೀ ಸ್ವಾಮಿಗಳು

ಅವಿಚ್ಛಿನ್ನ ಪರಂಪರೆಯ ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ 1994 ಏಪ್ರಿಲ್ ನಲ್ಲಿ ಸಂನ್ಯಾಸಧೀಕ್ಷೆ ಪಡೆದರು.



1999 ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಆಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.

ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ.

No comments: